Search for products..

Home / Categories / Kannada /

Vachana Darshana | ವಚನ ದರ್ಶನ

Vachana Darshana | ವಚನ ದರ್ಶನ




Product details

೧೨ನೆಯ ಶತಮಾನದಲ್ಲಿ ಕನ್ನಡದಲ್ಲಿ ಮೂಡಿಬಂದ ವಚನಸಾಹಿತ್ಯವು ವಾಙ್ಮಯ ಜಗತ್ತಿನ ಒಂದು ಅಚ್ಚರಿ. ದೇಶಾದ್ಯಂತ ನಡೆದ ಭಕ್ತಿಮಾರ್ಗದ ಪುನರುತ್ಥಾನದಲ್ಲಿ ವಚನಸಾಹಿತ್ಯದ ಪಾತ್ರವು ಮಹತ್ವದ್ದಾಗಿದೆ. ವಚನಗಳ ನಿಜವಾದ ಅರ್ಥವೇನು? ಇದನ್ನು ದರ್ಶನವೆಂದು ಏಕೆ ಕರೆಯಬೇಕು? ಪಾಶ್ಚಾತ್ಯ ಮನೋಧರ್ಮದಲ್ಲಿ ವಚನಗಳನ್ನು ಓದಿದರೆ ಮೂಡುವ ತಪ್ಪುಕಲ್ಪನೆಗಳೇನು? ವಚನಗಳನ್ನು ಅರ್ಥೈಸಿಕೊಳ್ಳುವ ಸರಿಯಾದ ದೃಷ್ಟಿಕೋನ ಯಾವುದು ಇತ್ಯಾದಿ ಹಲವು ಸಂಗತಿಗಳನ್ನು ಅತ್ಯಂತ ಸ್ಪಷ್ಟವಾದ ಭಾಷೆಯಲ್ಲಿ, ಯಾವುದೇ ಗೊಂದಲಗಳಿಗೆ ಎಡೆಕೊಡದಂತೆ ತಿಳಿಸಿಕೊಡುವ ಕೃತಿಯೇ ‘ವಚನದರ್ಶನ’. ಈ ಕೃತಿಗೆ ಪ.ಪೂ. ಜಗದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು ಗೌರವ ಸಂಪಾದಕರಾಗಿದ್ದಾರೆ. ವೇದವಾಙ್ಮಯ, ಉಪನಿಷತ್ತುಗಳು, ದರ್ಶನಗಳು ಮೊದಲಾದ ಒಟ್ಟು ಭಾರತೀಯ ಜ್ಞಾನಪರಂಪರೆಯ ಜೊತೆ ವಚನಗಳನ್ನಿಟ್ಟು ಇಲ್ಲಿ ತುಲನಾತ್ಮಕವಾಗಿ ಅಧ್ಯಯನ ಮಾಡಲಾಗಿದೆ. ವಚನಪರಂಪರೆ, ಬೆಡಗಿನ ವಚನಗಳು, ಸಾಮಾಜಿಕ ಸಾಮರಸ್ಯ, ನೈತಿಕ ಮೌಲ್ಯಗಳು, ಕಲ್ಯಾಣರಾಜ್ಯ ಮುಂತಾದ ಹಲವು ಸಂಗತಿಗಳ ಕುರಿತು ಇಪ್ಪತ್ತು ವಿಷಯತಜ್ಞರು ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ.


Similar products


Home

Cart

Account