TattvaSurabhi
Product details
ಭಾರತದಲ್ಲಿ ಎಲ್ಲರೂ ಮಾತಾಡುವ, ಆದರೆ ಬಹಳ ಕಡಮೆ ಚರ್ಚೆಯಾಗುವ ವಿಷಯವೆಂದರೆ ತತ್ತ್ವ – ಅರ್ಥಾತ್ ಫಿಲಾಸಫಿ. ಗ್ರೀಕ್ ನಾಗರಿಕತೆಯ ಉತ್ಪನ್ನವಾಗಿ ಬಂದ ಫಿಲಾಸಫಿಗೂ ಭಾರತೀಯ ಹಿನ್ನೆಲೆಯಲ್ಲಿ ಮೂಡಿಬಂದ ತತ್ತ್ವಜ್ಞಾನಕ್ಕೂ ಬಹಳ ವ್ಯತ್ಯಾಸವಿದೆ. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ವಿಜ್ಞಾನ-ತಂತ್ರಜ್ಞಾನಗಳಂಥ ವಿಚಾರಗಳನ್ನು ಗ್ರೀಕ್ ಫಿಲಾಸಫಿಯ ಹಿನ್ನೆಲೆಯಲ್ಲಿ ಅರ್ಥೈಸುವ ಕೆಲಸ ನಡೆದಿದೆಯೇ ಹೊರತು ಭಾರತೀಯ ತತ್ತ್ವಜ್ಞಾನದ ಹಿನ್ನೆಲೆಯಲ್ಲಿ ನೋಡುವ, ವಿವೇಚಿಸುವ ಕೆಲಸ ನಡೆದಿಲ್ಲ. ಭಾರತೀಯ ತತ್ತ್ವಜ್ಞಾನದ ಕೆಲವು ಪ್ರಮುಖಾಂಶಗಳನ್ನು ವಿಸ್ತೃತವಾಗಿ ಚರ್ಚಿಸುವ ಬಹುಮುಖ್ಯ ಶಾಸ್ತ್ರಾರ್ಥ ಕೃತಿಯೇ “ತತ್ತ್ವಸುರಭಿ”.