Search for products..

Home / Categories / Kannada /

Success Mantra

Success Mantra



badge
badge
badge

Product details

ಯಶಸ್ಸು ಅಂದರೆ ಏನು? ದುಡ್ಡೇ? ಹೆಸರೇ? ಕೀರ್ತಿಯೇ? ಪದವಿಯೇ? ಪ್ರಶಸ್ತಿಯೇ? ಸೌಕರ್ಯವೇ? ಒಬ್ಬೊಬ್ಬರಿಗೆ ಒಂದೊಂದು ಸರಿ ಅನಿಸಬಹುದು. ಇವೆಲ್ಲ ಬದುಕಿನ ಒಂದೊಂದು ಹಂತಗಳಾಗಿರಬಹುದೇ ಹೊರತು ಅಂತಿಮ ನಿಲ್ದಾಣಗಳಲ್ಲ. ಯಾವುದರಿಂದ ಮನಸ್ಸಿಗೆ ಸಂತೋಷ ಮತ್ತು ತೃಪ್ತಿ ಸಿಗುತ್ತದೋ, ಯಾವುದು ಹೆಚ್ಚು ಸಮಯ ನಮ್ಮೊಂದಿಗೆ ಉಳಿಯುತ್ತದೋ ಅದೇ ಯಶಸ್ಸು.ನಮ್ಮ ತರುಣ ಜನಾಂಗಕ್ಕೆ ಈ ನಿಟ್ಟಿನಲ್ಲಿ ಸ್ಪಷ್ಟ ಮಾರ್ಗದರ್ಶನದ ಅಗತ್ಯವಿದೆ. ಅವರಿಗೆ ಯಾವ ವಯಸ್ಸಿನಲ್ಲಿ ಏನು ಬೇಕೋ ಅದು ಸಿಗುತ್ತಿಲ್ಲ. ಒಳಗಿಂದಲೇ ಗಟ್ಟಿಯಾಗುತ್ತಿಲ್ಲ. ಹೊರಗಿನಿಂದ ಯಾವ ಬಣ್ಣ ಬಳಿದರೂ ತಿರುಳು ಸರಿಯಾಗಿಲ್ಲದಿದ್ದರೆ ಆ ಬಣ್ಣಕ್ಕೆ ಬೆಲೆಯಿಲ್ಲ.

 

‘ಸಕ್ಸೆಸ್ ಮಂತ್ರ’ ಪುಸ್ತಕದ ಹಿಂದೆ ಇಂತಹ ಒಂದು ಕಾಳಜಿಯಿದೆ. ನಮ್ಮ ಮಕ್ಕಳು ನೆಮ್ಮದಿಯ ನಾಳೆಗಳನ್ನು ಕಾಣಬೇಕಾದರೆ — ಯಶಸ್ವೀ ಜೀವನ ನಡೆಸಬೇಕಾದರೆ — ಒಳಗಿನಿಂದ ಮತ್ತು ಹೊರಗಿನಿಂದ ಹೇಗೆ ಬೆಳೆಯಬೇಕು ಎಂಬ ಬಗ್ಗೆ ಇಲ್ಲಿ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಪುಟ್ಟ ಪುಟ್ಟ ಅಧ್ಯಾಯಗಳಿವೆ.ಇಚ್ಛಾಶಕ್ತಿ, ನಿರ್ಧಾರಶಕ್ತಿ, ಸಮಸ್ಯೆ ಪರಿಹಾರ, ಧನಾತ್ಮಕ ಚಿಂತನೆ, ತಾಳ್ಮೆ, ಭಾವಪೋಷಣೆ, ವಿವೇಕ, ಸಹಾನುಭೂತಿ, ಹೊಂದಾಣಿಕೆ ಇತ್ಯಾದಿಗಳ ಬಗ್ಗೆ, ಸಂವಹನ ಕಲೆ, ನಾಯಕತ್ವ, ಸಮಯ ನಿರ್ವಹಣೆ, ಸಂದರ್ಶನ ಕೌಶಲ್ಯ, ತಂಡ ಪ್ರಯತ್ನ, ವ್ಯಕ್ತಿತ್ವ ವಿಕಸನ ಮೊದಲಾದ ವಿಷಯಗಳ ಬಗ್ಗೆ ಇಲ್ಲಿ ಪ್ರೇರಣಾತ್ಮಕ ಲೇಖನಗಳಿವೆ. ಆಧುನಿಕ ಜಗತ್ತು ತೆರೆದಿಟ್ಟಿರುವ ಸಾವಿರಾರು ಉದ್ಯೋಗಾವಕಾಶಗಳ ಕುರಿತು ಕೂಡ ಒಂದು ಭಾಗವನ್ನು ಮೀಸಲಿಡಲಾಗಿದೆ.

 

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಹೆತ್ತವರು ಓದಲೇಬೇಕಾದ ಪುಸ್ತಕ.


Similar products


Home

Cart

Account