Menu

Kannada

Kannada

Sangama | ಸಂಗಮ



Product details

ಡಾ. ಎಚ್. ಆರ್. ವಿಶ್ವಾಸ ಅವರ ಹೊಸ ಕಾದಂಬರಿ 'ಸಂಗಮ' ಕರ್ನಾಟಕದ ಮಲೆನಾಡಿನ ಪರಿಸರದಲ್ಲಿ ನಡೆಯುವ, ಪ್ರಸ್ತುತ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವ ಅವಿವಾಹವೆಂಬ ಪರಿಸ್ಥಿತಿಯನ್ನು ಕುರಿತಾಗಿದೆ. ವರ್ತಮಾನದ ಆಗುಹೋಗುಗಳನ್ನು ಸೂಕ್ಷ್ಮ ಕಣ್ಣುಗಳಿಂದ ವೀಕ್ಷಿಸುತ್ತ, ಎಲ್ಲೂ ನ್ಯಾಯಾಧೀಶನ ಪಾತ್ರ ವಹಿಸದೆ, ವಸ್ತುಸ್ಥಿತಿಯನ್ನು ಅದಿದ್ದಂತೆ ಓದುಗರ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಪ್ರತಿ ಪುಟದಲ್ಲೂ ಇಲ್ಲಿ ಎದ್ದುಕಾಣುತ್ತದೆ. ವೈಯಕ್ತಿಕ ನೆಲೆಯಿಂದ ಪ್ರಾರಂಭವಾಗುವ ಸಮಸ್ಯೆಯ ಬೀಜ ಕೊನೆಗೆ ಇಡೀ ಸಮಾಜವನ್ನು ಆವರಿಸಿಕೊಂಡಾಗ ಅದಕ್ಕೆ ಸಮಾಜದ ದಾರಿದೀಪದಂತಿರುವ ಮಠ-ಮಠಾಧಿಪತಿ ವ್ಯವಸ್ಥೆ ಹೇಗೆ ಸ್ಪಂದಿಸುತ್ತದೆ, ಸ್ಪಂದಿಸಬೇಕು ಎಂಬುದನ್ನು ಲೇಖಕರು ಬಹಳ ಹೃದಯಸ್ಪರ್ಶಿಯಾಗಿ ಹೇಳಿದ್ದಾರೆ. ಈಗಾಗಲೇ ವೈಚಾರಿಕ ಲೇಖನಗಳ ಲೇಖಕರಾಗಿ, ಕಾದಂಬರಿಕಾರ ಹಾಗೂ ಅನುವಾದಕರಾಗಿ ಹೆಸರು ಮಾಡಿರುವ ವಿಶ್ವಾಸ ಅವರ ಈ ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯ ಸೇರ್ಪಡೆ.

You may also like

Home
Shop
Bag
Account