SamskaraSampada
Product details
ತಾಳಮದ್ದಲೆ
ಆಶು ಮಾತನ್ನು ಅವಲಂಬಿಸಿದ ಜಗತ್ತಿನ ಏಕೈಕ ಕಲಾಪ್ರಕಾರವಾದರೂ ತಾಳಮದ್ದಲೆಯ ಕುರಿತು ಬಂದಿರುವ ಕೃತಿಗಳು ಕಡಿಮೆ. ಯಕ್ಷಗಾನರಂಗದಲ್ಲಿ ಹಲವು ದಶಕಗಳಿಂದ ಗುರುತಿಸಿಕೊಂಡಿರುವ, ಸ್ವತಃ ಒಳ್ಳೆಯ ಅರ್ಥಧಾರಿಗಳಾಗಿದ್ದು ತಾಳಮದ್ದಲೆಗಾಗಿ ಮೀಸಲಾದ ಸಂಘಟನೆ ನಡೆಸುತ್ತಿರುವ ಶ್ರೀಧರ ಡಿ. ಎಸ್. ಈ ಕಲಾಪ್ರಕಾರದ ಸಮಗ್ರ ಚಿತ್ರಣ ಕೊಡುವ ಕೃತಿಯನ್ನು ರಚಿಸಿದ್ದಾರೆ. ಪ್ರಸಂಗ ರಚನೆ, ಅರ್ಥಧಾರಿಗೆ ಇರಬೇಕಾದ ಸಂಸ್ಕಾರ ಮತ್ತು ಸಿದ್ಧತೆ, ಭಾಗವತಿಕೆಯ ಮಹತ್ವ ಮತ್ತು ಔಚಿತ್ಯ, ತಾಳ-ಮದ್ದಲೆಗಳ ಸಹಯೋಗ, ಪ್ರೇಕ್ಷಕವರ್ಗ, ಸಂಘಟನೆ-ಸಂಯೋಜನೆಗಳ ಸವಾಲುಗಳು, ಯಕ್ಷಗಾನ ಹಾಗೂ ತಾಳಮದ್ದಲೆಯ ನಡುವಿನ ಕೊಡುಕೊಳ್ಳುವಿಕೆ – ಹೀಗೆ ತಾಳಮದ್ದಲೆಯ ಸುತ್ತಮುತ್ತಲಿನ ಎಲ್ಲ ವಿಚಾರಗಳನ್ನೂ ಭಾವಾತಿರೇಕವಿಲ್ಲದೆ ಅತ್ಯಂತ ಸಂಯಮದಿಂದ ಚರ್ಚಿಸುವ ಪ್ರಬುದ್ಧತೆಯನ್ನು ಈ ಕೃತಿಯಲ್ಲಿ ಕಾಣಬಹುದು.