Rashtradharma | ರಾಷ್ಟ್ರಧರ್ಮ
Product details
ಹಿಂದೆ ಸನಾತನ ಧರ್ಮದ ಬಗ್ಗೆ ಜನರಲ್ಲಿ ಒಂದು ಬಗೆಯ ಸ್ಪಷ್ಟತೆ ಇತ್ತು ಹಾಗೂ ರಿಲಿಜನ್ ಗಳ ವಿಷಯದಲ್ಲಿ ಅಸ್ಪಷ್ಟತೆ ಇತ್ತು. ಆದರೆ ಇಂದು ರಿಲಿಜನ್ ವಿಷಯದಲ್ಲಿ ಹೆಚ್ಚು ಸ್ಪಷ್ಟತೆ ಪಡೆಯಲು ಸಾಧ್ಯವಾಗಿದೆ, ಆದರೆ ಸನಾತನ ಅಥವಾ ಹಿಂದು ಧರ್ಮದ ಬಗ್ಗೆಯೇ ಹಲವು ಗೊಂದಲಗಳು, ಸಂದಿಗ್ಧಗಳು ನಿರ್ಮಾಣವಾಗಿವೆ. ರಾಜಕಾರಣಿಗಳ ಹೇಳಿಕೆಗಳು, ಬುದ್ಧಿಜೀವಿಗಳ ಬರವಣಿಗೆಗಳು ಹಾಗೂ ನ್ಯಾಯಾಂಗವು ಕಾಲಕಾಲಕ್ಕೆ ಕೊಟ್ಟ ತೀರ್ಪುಗಳು - ಹೀಗೆ ಹಲವು ಸಂಗತಿಗಳು ಒಂದರೊಳಗೊಂದು ಸೇರಿಕೊಂಡು ಇಂದು ಸನಾತನ ಧರ್ಮದ ರೂಪರೇಖೆಗಳನ್ನು ಅರಿಯುವುದೇ ದುಸ್ತರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಹಿಂದು ಧರ್ಮದ ವ್ಯಾಖ್ಯೆ ಮತ್ತು ವ್ಯಾಖ್ಯಾನವನ್ನು ಹೇಗೆ ಮಾಡಬಹುದು; ಅದರ ಗುಣಲಕ್ಷಣಗಳೇನು; ಯಾವುದು ಸನಾತನ ಧರ್ಮದ ಪರಿಧಿಗೆ ಬರುತ್ತದೆ ಯಾವುದು ಅಲ್ಲ - ಇಂಥ ಹತ್ತು ಹಲವು ಸಂಗತಿಗಳ ಬಗ್ಗೆ ಸ್ಪಷ್ಟತೆ ಕೊಡುವ ಕೆಲಸವನ್ನು ಡಾ. ಅಜಕ್ಕಳ ಗಿರೀಶ್ ಭಟ್ ಅವರ ಕೃತಿ 'ರಾಷ್ಟ್ರಧರ್ಮ' ಮಾಡುತ್ತದೆ. ಇದು ಸನಾತನ ಧರ್ಮದ ಬಗ್ಗೆ ತಿಳಿಯಬಯಸುವವರು, ಅರೆಬರೆ ತಿಳಿದುಕೊಂಡವರು, ಮತ್ತು ಎಲ್ಲವನ್ನೂ ತಿಳಿದಿದ್ದೇವೆ ಎಂದು ಭಾವಿಸಿದವರು - ಹೀಗೆ ಸಮಸ್ತರೂ ಓದಿ ಮನನ ಮಾಡಿಕೊಳ್ಳಬೇಕಾದ ಕೃತಿ.