Pinch of prapancha
Product details
ಇದುವರೆಗೆ ೬೦ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿರುವ, ವೃತ್ತಿಯಲ್ಲಿ ಉದ್ಯಮಿ ಮತ್ತು ಬ್ಯಾಂಕಿಂಗ್ ಕ್ಷೇತ್ರ ಪರಿಣಿತ ಆಗಿರುವ ರಂಗಸ್ವಾಮಿ ಮೂಕನಹಳ್ಳಿ, ತಾವು ಸಂದರ್ಶಿಸಿದ ಹತ್ತು ದೇಶಗಳ ಬಗ್ಗೆ ಈ ಕೃತಿಯಲ್ಲಿ ವಿವರವಾಗಿ ಬರೆದಿದ್ದಾರೆ. ಪ್ರತಿ ದೇಶದ ಜನಜೀವನ, ಸಂಸ್ಕೃತಿ, ಆಹಾರಪದ್ಧತಿ, ಪ್ರೇಕ್ಷಣೀಯ ಸ್ಥಳಗಳು, ಶಿಷ್ಟಾಚಾರಗಳು, ಇತಿಹಾಸ ಮುಂತಾದ ಹಲವು ವಿಷಯಗಳ ವರ್ಣರಂಜಿತ ಪರಿಚಯ, ಪ್ರತಿ ಪುಟದಲ್ಲೂ ಅನನ್ಯ ಮಾಹಿತಿ, ಕೂತಲ್ಲೇ ಜಗತ್ತು ತೋರಿಸುವ ಅತ್ಯಾಕರ್ಷಕ ವಿಡಿಯೋಗಳು, ಪ್ರವಾಸ ಹೋಗುವಾಗ ಪೂರ್ವಸಿದ್ಧತೆ ಹೇಗಿರಬೇಕು ಎಂಬ ಸಲಹೆ, ಗೂಗಲ್ ದೇವರು ಕೊಡದ ಅಪರೂಪದ ಮಾಹಿತಿಗಳು.. ಮುಂತಾದ ಹಲವು ಸಂಗತಿಗಳು ತುಂಬಿರುವ ಪ್ರವಾಸ ಕಥನ ಇದು. ಸ್ಪೇನ್, ಪೋರ್ಚುಗಲ್, ಅಂದೋರಾ, ಲಿಚನ್‌ಸ್ಟೈ ನ್ , ಸ್ವಿಝರ್‌ಲ್ಯಾಂಡ್‌ನಂಥ ಯುರೋಪಿಯನ್ ದೇಶಗಳು, ಯುಎಇ ಎಂಬ ಮರಳುಗಾಡಿನ ಅಚ್ಚರಿ, ಮಲೇಷ್ಯ, ಶ್ರೀಲಂಕಾದಂಥ ಏಷ್ಯನ್ ದೇಶಗಳು – ಈ ಕೃತಿಯಲ್ಲಿ ಜಾಗ ಪಡೆದಿವೆ.