Nakko nakko nasruddhin
Product details
ನಕ್ಕೊ ನಕ್ಕೊ ನಸ್ರುದ್ದೀನ್
ಮುಲ್ಲಾ ನಸ್ರುದ್ದೀನ್ ಕತೆಗಳನ್ನು ಆಗಾಗ ನಾವು ಪತ್ರಿಕೆಗಳಲ್ಲಿ ಓದುತ್ತೇವೆ. ನಸ್ರುದ್ದೀನನ ಪ್ರಾಮುಖ್ಯವೇನು ಎಂಬುದನ್ನು ಒಶೋ ತಮ್ಮೊಂದು ಉಪನ್ಯಾಸದಲ್ಲಿ ತಿಳಿಸಿದ್ದಾರೆ. ಆತನ ಜೋಕುಗಳಿಲ್ಲದೆ ಅವರ ಉಪನ್ಯಾಸಗಳು ಮುಗಿಯುತ್ತಿರಲಿಲ್ಲ. ನಸ್ರುದ್ದೀನನ ಬಗ್ಗೆ ಓಶೋ ಹೇಳಿದ ಮಾತುಗಳನ್ನು ಸಂಗ್ರಹಿಸಿಕೊಟ್ಟಿರುವ ಈ ಕೃತಿಯಲ್ಲಿ ಆತನ ನೂರಾರು ಕತೆಗಳನ್ನು ಕೊಡಲಾಗಿದೆ. ನಸ್ರುದ್ದೀನ ಪೆದ್ದನೆ, ಬುದ್ಧಿವಂತನೆ, ಧರ್ಮನಿಷ್ಠನೆ, ಧರ್ಮಭ್ರಷ್ಟನೆ? – ಪ್ರಶ್ನೆಗಳು ಇಂದಿಗೂ ಜೀವಂತ. ತನ್ನ ವ್ಯಕ್ತಿತ್ವದ ಬಗ್ಗೆ ಹೀಗೆಯೇ ಎಂಬಂಥ ಯಾವ ನಿರ್ಣಯವನ್ನೂ ಎಳೆಯಲು ಆತ ಅವಕಾಶ ಕೊಟ್ಟಿಲ್ಲ. ಅವನ ವ್ಯಕ್ತಿತ್ವದ ವಿವಿಧ ಮುಖಗಳನ್ನು ಕಾಣಿಸುವ, ಮುಖದಲ್ಲಿ ಮಂದಹಾಸ ಮಿನುಗಿಸುವ ಹಾಸ್ಯಕತೆಗಳ ಸಂಗ್ರಹ ಈ ಪುಸ್ತಕ.