Makkaliggi Rani Ahalyabayi Holkar Stories (Kannada)
Product details
ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಅಲ್ಲಿ ನಮ್ಮನ್ನು ಬೆರಗುಗೊಳಿಸುವ ಅನೇಕ ಪಾತ್ರಗಳು ಕಾಣಸಿಗುತ್ತವೆ.
ಅಂಥವರಲ್ಲಿ ರಾಣಿ ಅಹಲ್ಯಾಬಾಯಿ ಹೋಳ್ಕರ್ ಕೂಡ ಒಬ್ಬರು. ಒಂದೆಡೆ ಸಂಸಾರದ ಜವಾಬ್ದಾರಿಗಳನ್ನು ಸಂಭಾಳಿಸುತ್ತ,
ಇನ್ನೊಂದೆಡೆ ತನ್ನನ್ನೇ ನಂಬಿದ ಜನತೆ ಹಾಗೂ ಸಮಾಜದ ಒಳಿತಿಗಾಗಿ ಶ್ರಮಿಸಿದ ಅಹಲ್ಯಾ ಬಾಯಿಯ ಜೀವನವೇ
ಅನನ್ಯವಾಗಿದೆ. ಯುದ್ಧಭೂಮಿಯಲ್ಲಿ ವೀರ ನಾರಿಯಾಗಿ, ತನ್ನ ಜವಾಬ್ದಾರಿಗಳನ್ನು ನಿರ್ವಹಿಸುವ ವಿಚಾರದಲ್ಲಿ
ಕರ್ಮಯೋಗಿನಿಯಾಗಿ, ಪ್ರಜೆಗಳ ಒಳಿತಿಗಾಗಿ ಶ್ರಮಿಸಿದ ಮಾತೋಶ್ರೀ ಯಾಗಿ ಅವರು ಅನೇಕ ಸಂಘರ್ಷಗಳನ್ನು ಯಶಸ್ವಿಯಾಗಿ
ಎದುರಿಸಿದ್ದಾರೆ. ಇಂತಹ ಬಹುಮುಖ ವ್ಯಕ್ತಿತ್ವದ ಅಹಲ್ಯಾ ಬಾಯಿಯ ಜೀವನದ ಕಥೆಗಳು ಮಕ್ಕಳಿಗೆ ಖಂಡಿತ ಸ್ಪೂರ್ತಿ
ನೀಡುತ್ತವೆ.