Search for products..

Home / Categories / Kannada /

Makkaligagi Sri Gurunathara Kategalu

Makkaligagi Sri Gurunathara Kategalu



badge
badge
badge

Product details

ಮೈಸೂರು, ಬೆಂಗಳೂರು ಹಾಗೂ ಮಲೆನಾಡಿನ ಪ್ರಾಂತ್ಯಗಳು ಅಂದರೆ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದ ಭಾಗಗಳಲ್ಲಿ ಗುರುನಾಥರ ಹೆಸರು ಕೇಳದವರಿಲ್ಲ. ಹಾಗೆಂದ ಮಾತ್ರಕ್ಕೆ ಅವರ ಮಹಿಮೆ ಅಥವಾ ಕಾರ್ಯಕ್ಷೇತ್ರ ಇಷ್ಟೇ ಜಿಲ್ಲೆಗಳಿಗೆ ಸೀಮಿತ ಎಂದೂ ಸಹ ಅರ್ಥವಲ್ಲ. ಇತರ ರಾಜ್ಯಗಳು, ಹೊರದೇಶಗಳಲ್ಲೂ ಗುರುನಾಥರ ಭಕ್ತರು, ಶಿಷ್ಯರು ಇಂದಿಗೂ ಪ್ರತೀ ಕ್ಷಣ ಅವರನ್ನು ನೆನೆಯುತ್ತಾ, ಅವರ ಚೈತನ್ಯದ ಜೊತೆ ಬದುಕುತ್ತಿದ್ದಾರೆ. 

ಯಾವುದೇ ಕಾರ್ಯಕ್ರಮದಲ್ಲಿ, ಹಬ್ಬ-ಹರಿದಿನಗಳಂದು ನಾಲ್ಕು ಜನ ಬಂಧುಮಿತ್ರರು ಒಂದೆಡೆ ಸೇರಿದಾಗ, ಗುರುನಾಥರ ಬಗ್ಗೆ, “ಓ ಗುರುನಾಥರಾ, ನಾನು ಇವತ್ತು ಈ ಸ್ಥಿತಿಯಲ್ಲಿರಲು ಅವರೇ ಕಾರಣ”, “ನಾನು ಇಂದು ಬದುಕಿದ್ದೇನೆ ಎಂದರೆ ಅವರ ಭಿಕ್ಷೆ”, “ಇಂದು ನಾನು ಸಾಲದಿಂದ ಮುಕ್ತನಾಗಿ, ನನ್ನ ಸ್ವಂತ ಮನೆಯಲ್ಲಿ ನೆಮ್ಮದಿಯಿಂದ ಇದ್ದೇನೆ ಎಂದರೆ ಅವರ ಕಾರುಣ್ಯವೇ ಕಾರಣ”, “ನನಗೆ ಇಂತಹ ಖಾಯಿಲೆ ಬಂದಿತ್ತು, ಗಂಭೀರ ಸ್ಥಿತಿ ಅಂತ ವೈದ್ಯರು ಹೇಳಿದ್ದರು, ಇವತ್ತು ಅದೆಲ್ಲಾ ಸರಿಯಾಗಿ ಆರೋಗ್ಯ ಕರುಣಿಸಿದವರು ಅವರೇ”, “ದಾರಿ ತಪ್ಪಿದ್ದ ನಮ್ಮ ಮಗನನ್ನು ತಿದ್ದಿ ಒಳ್ಳೆ ದಾರಿಗೆ ತಂದವರು ಅವರೇ” ಎಂದು, ಹೀಗೆ ಪ್ರತಿಯೊಬ್ಬರೂ ಅವರವರ ಅದ್ಭುತ ಅನುಭವಗಳನ್ನು ಹೇಳಿಕೊಳ್ಳುವವರೇ. ಒಬ್ಬೊಬ್ಬರ ಅನುಭವಗಳೂ ಒಂದೊಂದು ವಿಸ್ಮಯವೇ. ಅವರು ವಿಶ್ವವ್ಯಾಪಿಯಾದ ನಂತರವೂ ಇಂದಿಗೂ ತಮ್ಮ ಲೀಲಾವಿಶೇಷಗಳನ್ನು ಮುಂದುವರೆಸುತ್ತಿದ್ದು, ಅಪಾರ ಭಕ್ತವೃಂದವನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಸುತ್ತಿರುವುದನ್ನು ಕಾಣಬಹುದು. ಗುರುಗಳ ಮಹಿಮೆ ಸಾರುವ ಕೆಲವು ಸಂದರ್ಭಗಳನ್ನು ಮಕ್ಕಳಿಗಾಗಿ ಈ ಹೊತ್ತಿಗೆಯಲ್ಲಿ ಕೊಡಲಾಗಿದೆ.


Similar products


Home

Cart

Account