Search for products..

Home / Categories / Kannada /

Mahakaala - 2

Mahakaala - 2



badge
badge
badge

Product details

ನೇತಾಜಿ ಬಾಲ್ಯದಲ್ಲಿ ಹೇಗಿದ್ದರು?

ಅವರ ವ್ಯಕ್ತಿತ್ವಕ್ಕೆ ಶಿವಾಜಿಯ ಸ್ಪೂರ್ತಿ ಮೆರುಗು ಕೊಟ್ಟದ್ದು ಹೇಗೆ?

ಪ್ರತಿಷ್ಠಿತ ಬಂಗಾಳಿ ಕುಟುಂಬದಲ್ಲಿ ಜನಿಸಿದ, ಸದಾ ಶ್ರೀಮಂತಿಕೆಯಲ್ಲೇ ತೇಲಾಡಬಹುದಾಗಿದ್ದ ಯುವಕ ಸುಭಾಷ್ ಯಾಕೆ ಐಸಿಎಸ್ ಪರೀಕ್ಷೆ ಬರೆದರು? ಬರೆದು ತೇರ್ಗಡೆಯಾದ ಮೇಲೂ ಸಹ ಯಾಕೆ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟರು? 

ಗಾಂಧೀಜಿಗೂ ಅವರಿಗೂ ಯಾವ ಕಾರಣಕ್ಕೆ ಭಿನ್ನಾಭಿಪ್ರಾಯ ಬಂತು? ನೆಹರು ಮತ್ತು ಗಾಂಧೀಜಿಯ ಪರಿವಾರ ಕಾಂಗ್ರೆಸ್ಸಿನ ಒಳಗೆ ನೇತಾಜಿಯವರ ವಿರುದ್ಧ ಏನೇನು ಪಿತೂರಿಗಳನ್ನು ಮಾಡಿತು?

ಈ ಎಲ್ಲ ಘಟನಾವಳಿಗಳ ಸುತ್ತ ತಿರುಗುತ್ತದೆ 'ಮಹಾಕಾಲ'ದ ಎರಡನೇ ಭಾಗ 'ಸ್ಥಿತಿ'.

ಇದರಲ್ಲಿ ಕಾರ್ಯಕಾರಣ ಸಂಬಂಧಗಳ ಅನ್ವೇಷಣೆ ಇದೆ, ಜೊತೆಗೆ ಯಾವ ತರ್ಕಕ್ಕೂ ಸಿಕ್ಕದ ಮನುಷ್ಯರ ಆಕಾಂಕ್ಷೆ-ದುಗುಡ-ಅಸ್ಥಿರತೆಗಳ ಶೋಧನೆಯು ಘಟನೆಗಳ ಒಳಗೆ ಬೆರೆತು ಹೋಗಿದೆ. ಮೊದಲ ಬಾರಿಗೆ ಮಾನವೀಯ ನೆಲೆಯಲ್ಲಿ ನಮ್ಮ ಇತಿಹಾಸದ ಪೂರ್ವಜರನ್ನು ನಮ್ಮ ಕಾಲಕ್ಕೆ ಬರಮಾಡಿಕೊಳ್ಳುವ ಪ್ರಯತ್ನ ಇದು.

ಇಲ್ಲಿ ಕಥನವು ಉಯ್ಯಾಲೆಯಂತೆ 'ಸೃಷ್ಟಿ'ಯಿಂದ ಹಿಂದಕ್ಕೆ ಜೀಕಿಕೊಂಡು 'ಸ್ಥಿತಿ'ಯನ್ನು ಕಥನದ ಹಂದರದಲ್ಲಿ ಹಿಡಿಯಲು ಹವಣಿಸಿದೆ.

ತ್ರಿವಳಿ ಕಾದಂಬರಿಯ ಮೊದಲ ಭಾಗ ಭಾರೀ ಜನಪ್ರಿಯತೆಯನ್ನು ಗಳಿಸಿದ ನಂತರ, ಇದೀಗ ಅದರ ಎರಡನೆ ಭಾಗ ಪ್ರಕಟವಾಗುತ್ತಿದೆ. ನಿಮ್ಮ ಪ್ರತಿಯನ್ನು ಕಾಯ್ದಿರಿಸಿ! 


Similar products


Home

Cart

Account