Menu

Kannada

Kannada

Kannadadalli Shri Shankara - ಕನ್ನಡದಲ್ಲಿ ಶ್ರೀ ಶಂಕರ



Product details

ಸಂಸ್ಕೃತದಲ್ಲಿ ಸ್ತೋತ್ರಸಾಹಿತ್ಯಕ್ಕೆ ವಿಶೇಷ ಸ್ಥಾನವಿದೆ. ಅಲ್ಲಿ ದೇವತಾಸ್ತುತಿಯೇ ಪ್ರಧಾನವಾದರೂ ಸಾಹಿತ್ಯಾಂಶಗಳಿಗೆ ಬಹಳಷ್ಟು ಅವಕಾಶವಿದೆ. ಅಂಥ ಎಲ್ಲ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ದೇವರ ಸ್ತುತಿಗಳನ್ನು ಭಕ್ತಿಭಾವಪೂರ್ಣವಾಗಿ ರಚಿಸಿ ಸ್ತೋತ್ರಸಾಹಿತ್ಯಕ್ಕೂ ಅಗ್ರಮಾನ್ಯತೆಯನ್ನೂ ಅನನ್ಯತೆಯನ್ನೂ ತಂದವರು ಶ್ರೀ ಶಂಕರಾಚಾರ್ಯರು. ಅವರ ಬಹಳಷ್ಟು ಸ್ತೋತ್ರಗಳು ಜನಮಾನಸದಲ್ಲಿ ನೆಲೆಯಾಗಿವೆ; ಜನಸಾಮಾನ್ಯರ ನಾಲಗೆಯಲ್ಲೂ ನಲಿಯುತ್ತಿವೆ. ಶ್ರೀಶಂಕರರ ಎಲ್ಲ ಸ್ತೋತ್ರಗಳ ಸರಳ ಭಾವಾನುವಾದ ಇರುವ 'ಕನ್ನಡದಲ್ಲಿ ಶ್ರೀ ಶಂಕರ' ಕನ್ನಡಸಾಹಿತ್ಯಕ್ಕೊಂದು ಅನನ್ಯ ಕೊಡುಗೆ.

ಗಣೇಶ, ಶಿವ, ದೇವಿ, ವಿಷ್ಣು ಮುಂತಾದ ಹಲವು ದೇವರ ಕುರಿತು ಶಂಕರರು ಅತ್ಯಂತ ಸುಂದರ, ಸರಳ, ಪದಲಾಲಿತ್ಯಪೂರ್ಣ, ಭಾವಸಮೃದ್ಧ, ಭಕ್ತಿಭಾವೋಜ್ಜ÷ಕೇವಲ ಸ್ತೋತ್ರಗಳನ್ನು ರಚಿಸಿದ್ದಾರೆ. ಇವು ಶಬ್ದಾರ್ಥ ಅಲಂಕಾರಗಳಿAದ ಹೊಳೆಯುತ್ತವೆ. ಆದಿ, ಅಂತ್ಯಪ್ರಾಸಗಳಿAದ ತುಂಬಿರುವುದರಿಂದ ಪಠಿಸಲು ಮತ್ತು ನೆನಪಿಡಲು ಕೂಡ ಸುಲಭವಾಗಿವೆ. ಶಂಕರರು ಸ್ತೋತ್ರಗಳ ಮೂಲಕ ವೇದಾಂತಸಾರವನ್ನೂ ಹೇಳುವ ಅತಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ್ದಾರೆ. ಸನಾತನಧರ್ಮದಲ್ಲಿ ಸಗುಣೋಪಾಸನೆಗೆ ಅವಕಾಶವಿಲ್ಲ; ಶೈವರು ಶಿವನನ್ನಲ್ಲದೆ ಅನ್ಯ ದೇವರುಗಳನ್ನು ಸ್ತುತಿಸಬಾರದು; ಬ್ರಹ್ಮದ ಉಪಾಸನೆಯ ಹೊರತಾಗಿ ಉಳಿದೆಲ್ಲ ದೇವತಾರೂಪಗಳ ಆರಾಧನೆ ನಿಷಿದ್ಧ ಮುಂತಾದ ಹತ್ತುಹಲವಾರು ಅತಾರ್ಕಿಕ ಆಕ್ಷೇಪಗಳಿಗೆ ಉತ್ತರದಂತಿದೆ ಆಚಾರ್ಯ ಶಂಕರರ ಸ್ತೋತ್ರವಾಙ್ಮಯ.
ಸ್ತೋತ್ರಗಳನ್ನು ಪಠಿಸಿದರೆ ಪುಣ್ಯಸಂಚಯವಂತೂ ಇದೆ. ಆದರೆ ಅದರ ಜೊತೆಗೆ, ಸ್ತೋತ್ರಗಳ ಅರ್ಥವನ್ನು ತಿಳಿದು ಪಠಿಸಿದರೆ ಮನಸ್ಸಿಗೂ ಆಹ್ಲಾದ; ದೇವರಿಗೆ ಭಕ್ತನ ಹೃದಯ ಇನ್ನಷ್ಟು ಹತ್ತಿರವಾದಂತೆ. ಹಾಗಾಗಿ ಆಚಾರ್ಯ ಶಂಕರ ರಚಯಿತ ಎಲ್ಲ ಸ್ತೋತ್ರಗಳ ಕನ್ನಡ ಅನುವಾದವಿರುವ ಈ ಕೃತಿಯು ಆ ಮಹಾಪುರುಷರ ಪ್ರಖರ ಪ್ರತಿಭೆಯನ್ನು ಕನ್ನಡಿಗರಿಗೂ ಕಾಣಿಸಲಿ. ಸಂಸ್ಕೃತದ ಪಕ್ವಫಲದ ರುಚಿಯನ್ನು ಕನ್ನಡದ ನಾಲಗೆಯೂ ಸವಿಯಲಿ.

You may also like

Home
Shop
Bag
Account