Menu

Kannada

Kannada

Hindu yendarenu - ಹಿಂದೂ ಎಂದರೇನು?



Product details

ಹಿಂದೂ ಎಂದರೇನು?

ಹಿಂದೂ ಎಂಬ ಪದವು ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿದೆ. ಈ ಪದಕ್ಕೆ ಭಾರತೇತರ ಭಾಷೆಗಳ ನಿಘಂಟುಗಳಲ್ಲಿ ಹೀನಾರ್ಥವಿದೆ ಎಂದು ಕರ್ನಾಟಕದ ರಾಜಕಾರಣಿಯೊಬ್ಬರು ಹೇಳಿದ್ದು ಸುದ್ದಿಗೆ ಗ್ರಾಸವಾಗಿತ್ತು. ನಿಜಕ್ಕೂ ಹಿಂದೂ ಎಂಬ ಪದದ ಅರ್ಥವೇನು? ಅದಕ್ಕೆ ಅಸಭ್ಯ ಅಥವಾ ಅಸಹ್ಯ ಅರ್ಥವಿದೆಯೆ? ಅದನ್ನು ಆರ್ಯರು ಹುಟ್ಟುಹಾಕಿದರೆ? ಅಥವಾ ಹೊರಗಿನಿಂದ ಬಂದ ಪರದೇಶೀಯರು ಟಂಕಿಸಿದರೆ? ಹಿಂದೂ ಎಂಬ ಶಬ್ದ ಒಂದು ನದಿಗೆ ಅಥವಾ ಪ್ರಾಂತ್ಯಕ್ಕೆ ಸೀಮಿತವೆ? ಆ ಶಬ್ದವನ್ನು ತೀರ ಇತ್ತೀಚೆಗೆ ಸಾವರ್ಕರ್ ಸೃಷ್ಟಿಸಿದರೆ? ಇತ್ಯಾದಿ ಹತ್ತುಹಲವು ಪ್ರಶ್ನೆಗಳಿಗೆ ಉತ್ತರ ಕೊಡುವ ನಿಟ್ಟಿನಲ್ಲಿ ರಚನೆಯಾಗಿರುವ ಪುಟ್ಟ ಕೃತಿ “ಹಿಂದೂ ಎಂದರೇನು?” ಇದು ಬಹುಚರ್ಚಿತ ಪದದ ಅರ್ಥ-ವಿವರಣೆಗಳ ಜಿಜ್ಞಾಸೆಯನ್ನು ಎಲ್ಲ ಕೋನಗಳಿಂದ ಮಾಡುತ್ತದೆ.

You may also like

Home
Shop
Bag
Account