
Product details
ಹಿಮಾಲಯ ನಿಗೂಢತೆ, ಅಚ್ಚರಿ ಮತ್ತು ಅನೇಕ ಪರಮ ರಹಸ್ಯಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿರುವ ತಾಣ. ಜಡಬದುಕಿಗೆ ಚೈತನ್ಯದ ಪರಮೌಷಧಿ ಒದಗಿಸುವ, ಸುಪ್ತಚೇತನವನ್ನು ಬಡಿದೆಬ್ಬಿಸುವ ಶಕ್ತಿ ಹಿಮಾಲಯಕ್ಕಿದೆ. ಪದಗಳ ಚೌಕಟ್ಟಿನಲ್ಲಿ, ವಾಕ್ಯಗಳ ಪರಿಧಿಯಲ್ಲಿ ಶಿವ ಮತ್ತು ಹಿಮಾಲಯವನ್ನು ಕಟ್ಟಿಕೊಡುವುದು ಅಸಾಧ್ಯ. ಅದು ಅವರ್ಣನೀಯ, ಅವ್ಯಕ್ತ ಭಾವನಾ ಲಹರಿಯಲ್ಲಿ ಮುಳುಗಿ ಏಳುವ, ಅಂತಃಶಕ್ತಿಯ ಜಾಗೃತಿಗೆ ಪ್ರೇರಣೆ ಒದಗಿಸಬಲ್ಲ ತೀರ್ಥಕ್ಷೇತ್ರಗಳ ಸಾಲಿನಲ್ಲಿ ಬರುವ ಅಲೌಕಿಕ ಶಕ್ತಿ ಹೊಂದಿರುವ ಪುಣ್ಯಭೂಮಿ. ಸಹಸ್ರಾರು ವರ್ಷಗಳ ಸನಾತನ ಪರಂಪರೆಗೆ, ಭರತ ಖಂಡದ ಅಂತಃಸತ್ವ ಇಂದಿಗೂ ಗಟ್ಟಿಯಾಗಿ ನಿಲ್ಲಲು ಹಿಮಾಲಯ ನೀಡಿದ ಕೊಡುಗೆ ಕಡಿಮೆಯೇನಲ್ಲ.
Similar products