Ganithagnara Rasaprasangagalu - Rohith Chakrathirtha
Product details
ಗಂಭೀರ ವದನದ ಗಣಿತಜ್ಞರ ಬದುಕಿನಲ್ಲಿ ನಡೆದುಹೋದ ಸಣ್ಣಪುಟ್ಟ, ಆದರೆ ಸ್ವಾರಸ್ಯಕರವಾದ ಸಂಗತಿಗಳನ್ನು ಇಲ್ಲಿ ಒಟ್ಟಾಗಿ ಸಂಗ್ರಹಿಸಿ ಕೊಡಲಾಗಿದೆ. ಉದಂತಕಥೆ, ದೃಷ್ಟಾಂತಕಥೆ ಎಂದೆಲ್ಲ ಕರೆಸಿಕೊಳ್ಳಬಹುದಾದ ಇಲ್ಲಿನ ಬಹಳಷ್ಟು ಕಥೆಗಳಲ್ಲಿ ದೊಡ್ಡ ಸಂದೇಶಗಳೇ ಹುದುಗಿವೆ. ಈ ಪ್ರಸಂಗಗಳನ್ನು ಓದುಗರು ಸುಮ್ಮನೇ ಓದಿ ನಕ್ಕು ಸಂತೋಷ ಪಡಬಹುದು, ಇಲ್ಲವೇ ಭಾಷಣಕಾರರು ತಮ್ಮ ಮಾತಿನ ಮಧ್ಯೆ ಉದಾಹರಣಾರ್ಥ ಬಳಸಬಹುದು. ಶಿಕ್ಷಕರು ಈ ಪ್ರಸಂಗಗಳನ್ನು ಬಳಸಿಕೊಂಡು ತಮ್ಮ ತರಗತಿಯ ಪಾಠಪ್ರವಚನವನ್ನು ರಸವತ್ತಾಗಿ ಮಾಡಿಕೊಳ್ಳಬಹುದು. ಗಣಿತದ ಹಿನ್ನೆಲೆ ಇರದವರಿಗೂ ಇಲ್ಲಿನ ಕಥೆಗಳು ಆಪ್ತವಾಗುತ್ತವೆ. ಬದುಕಿನಲ್ಲಿ ಎದುರಾಗುವ ಕೆಲವು ಸನ್ನಿವೇಶಗಳಲ್ಲಿ ಮನುಷ್ಯರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಈ ಪ್ರಸಂಗಗಳು ಬಹಳ ಚೆನ್ನಾಗಿ ವಿವರಿಸುತ್ತವೆ. ಕೃತಿಯ ಕೊನೆಯಲ್ಲಿ ಐವತ್ತಕ್ಕೂ ಹೆಚ್ಚು ಗಣಿತಜ್ಞರ ಬದುಕಿನ ವಿವರಗಳನ್ನು ಕೊಡಲಾಗಿದೆ. ಇದು ಆಯಾ ವ್ಯಕ್ತಿಗಳ ಬಗ್ಗೆ ಆಸಕ್ತಿ ಇರುವವರಿಗೆ ಹೆಚ್ಚಿನ ಮಾಹಿತಿ ಕಲೆಹಾಕಲು ಅನುಕೂಲ ಮಾಡುತ್ತದೆ. ಮಕ್ಕಳಲ್ಲಿ ಗಣಿತಾಸಕ್ತಿ ಅರಳಿಸಲು ಇದೊಂದು ಅತ್ಯುತ್ತಮ ಕೊಡುಗೆ.