Search for products..

Home / Categories / Kannada /

Desi Prajatantra - Kannada Book

Desi Prajatantra - Kannada Book



badge
badge
badge

Product details

ವಿಶ್ವವನ್ನು ಆಧುನಿಕತೆಯತ್ತ ಮುನ್ನಡೆಸುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ದೈತ್ಯ ಬದಲಾವಣೆ; ಹೊಸ ಆಯಾಮಗಳನ್ನು ಹುಟ್ಟಿಸಿಕೊಳ್ಳುತ್ತಿರುವ ಸ್ಥಳೀಯ, ಭಾರತೀಯ, ಪ್ರಾದೇಶಿಕ ಹಾಗೂ ರಾಷ್ಟ್ರೀಯ ಮಹಾತ್ವಾಕಾಂಕ್ಷೆ; ವಿಶ್ವಮಟ್ಟದಲ್ಲಿ ಮುಖ್ಯ ಆಟಗಾರನಾಗಿ ಬೆಳೆಯುತ್ತಿರುವ ಚೀನಾದ ತಂತ್ರಗಾರಿಕೆ, ಮನುಷ್ಯಸಂಬಂಧಗಳನ್ನು ಮರುವಿಮರ್ಶೆಗೊಡ್ಡಿರುವ ಕೋವಿಡ್-19 ಸಾಂಕ್ರಾಮಿಕ – ಈ ಎಲ್ಲ ಹಿನ್ನೆಲೆಯಲ್ಲಿ, ಭಾರತೀಯ ಸನಾತನ ತತ್ತ್ವಶಾಸ್ತ್ರವನ್ನು ಅಧ್ಯಯನಕ್ಕಾಗಿ ಕೈಗೆತ್ತಿಕೊಳ್ಳಲು ಇದು ಸುಸಂದರ್ಭ. ಭಾರತೀಯ ಸಮಾಜದಲ್ಲಿ ಸಹಜವಾಗಿ ಇದ್ದೇ ಇರುವ ಮಾನವತಾವಾದಿ ಪ್ರಜಾತಾಂತ್ರಿಕ ಮೌಲ್ಯಗಳೇ ಸನಾತನ ಧಾರ್ಮಿಕ ಮೌಲ್ಯಗಳಾಗಿ ಹರಳುಗಟ್ಟಿದವು. ಇದನ್ನು ಆಧುನಿಕ ಜಗತ್ತಿಗೆ ತಕ್ಕಂತೆ ಮರುನಿರೂಪಿಸುವ ಮಹತ್ತರ ಕೆಲಸವನ್ನು ಸಮರ್ಥವಾಗಿ ಮಾಡಿದವರು ಪಂಡಿತ ದೀನ್ ದಯಾಳ್ ಉಪಾಧ್ಯಾಯರು. ಅವರ “ಏಕಾತ್ಮಮಾನವ ದರ್ಶನ”, ಮುಂದಿನ ದಿನಗಳಲ್ಲಿ ಒಟ್ಟಾಗಲಿರುವ ಪ್ರಜಾತಾಂತ್ರಿಕ ವ್ಯವಸ್ಥೆಗಳಲ್ಲಿ ಭಾರತವು ನಾಯಕಸ್ಥಾನದಲ್ಲಿ ನಿಲ್ಲಲು ಖಂಡಿತವಾಗಿಯೂ ದಾರಿದೀಪವಾಗಲಿದೆ. ಇದರ ಸ್ಪಂದನಶೀಲತೆ ಹಾಗೂ ನಾಗರಿಕತೆಯ ಅಂತಸ್ಸತ್ತ್ವವು ಪ್ರಪಂಚದ ಸಭ್ಯ-ಪ್ರಾಜ್ಞ ಚಿಂತನಶೀಲ ಮನಸ್ಸುಗಳನ್ನು ಸೆಳೆಯುತ್ತದೆ. ಮುಂದಿನ ದಿನಗಳಲ್ಲಿ ವಿಶ್ವವನ್ನು ಮುನ್ನಡೆಸಬೇಕಿರುವ ಸಾತ್ತ್ವಿಕಶಕ್ತಿಗಳಿಗೂ ಇದು ನಿರ್ದೇಶಕತತ್ತ್ವವಾಗಲಿದೆ.
ವಿಕಾಸ್ ಅವರ ಪರಿಶ್ರಮವನ್ನು ನಾವು ಈ ಹಿನ್ನೆಲೆಯಲ್ಲಿ ಗ್ರಹಿಸಬೇಕು.

– ಮುಕುಂದ ಚೆನ್ನಕೇಶವಪುರ
ಸಹಸರಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ


Similar products


Home

Cart

Account