Bharatheeya Shikshana Parampareya Marunota
Product details
ಭಾರತೀಯ ಶಿಕ್ಷಣ ಪರಂಪರೆಯ ಮರುನೋಟ
ಮೂಲ: ಸಹನಾ ಸಿಂಗ್ | ಕನ್ನಡಕ್ಕೆ: ಸ್ಮಿತಾ ಎಚ್.ಎಸ್., ಸ್ಮಿತಾ ರಾವ್, ಶಿವಕುಮಾರ್ ಜಿ.ವಿ.
ಸಹನಾ ಸಿಂಗ್ ಅವರು ಕಳೆದ ಹಲವಾರು ವರ್ಷಗಳಿಂದ ಭಾರತೀಯ ಶಿಕ್ಷಣ ಪರಂಪರೆ, ಭಾರತೀಯ ಜ್ಞಾನ ಪರಂಪರೆ ಕ್ಷೇತ್ರಗಳಲ್ಲಿ ನಿರಂತರವಾಗಿ ಬರವಣಿಗೆ, ಉಪನ್ಯಾಸ, ಇನ್ನಿತರ ಕಾರ್ಯಚಟುವಟಿಕೆಗಳು – ಇತ್ಯಾದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತೀಯ ಶಿಕ್ಷಣ ಕ್ರಮವು ಪ್ರಾಚೀನ ಕಾಲದಲ್ಲಿ ಹೇಗಿತ್ತು, ಆಗ ಇದ್ದ ಶಿಕ್ಷಣ ಪದ್ಧತಿಗಳಲ್ಲಿ ಎಷ್ಟನ್ನು ಇಂದು ಪಾಲಿಸುತ್ತಿದ್ದೇವೆ, ಅವನ್ನು ಮತ್ತೆ ನವೀಕರಿಸುವ ಅಗತ್ಯವಿದೆಯೆ, ಇದ್ದರೆ ಅವನ್ನು ಹೇಗೆ ಮಾಡಬಹುದು, ಭಾರತೀಯ ಶಿಕ್ಷಣ ಕ್ರಮದ ಮೌಲ್ಯಗಳೇನು, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಬಗೆ ಹೇಗೆ – ಹೀಗೆ ಹಲವು ವಿಷಯಗಳನ್ನಿಟ್ಟುಕೊಂಡು ವಿಸ್ತಾರವಾಗಿ ವಿಷಯ ಪ್ರಸ್ತುತಿ ಮಾಡಿರುವ ಕೃತಿ ಇದು. ಇಲ್ಲಿ ತಾನು ಬರೆದಿರುವ ಪ್ರತಿ ವಾಕ್ಯಕ್ಕೂ ದಾಖಲೆಗಳನ್ನು, ಅಧಿಕೃತ ಪುರಾವೆಗಳನ್ನು ಲೇಖಕಿ ಒದಗಿಸಿಕೊಟ್ಟಿರುವುದು ಕೃತಿಯ ಮೌಲ್ಯವನ್ನು ಅಧಿಕಗೊಳಿಸಿದೆ ಮಾತ್ರವಲ್ಲ, ಅದನ್ನು ಶೈಕ್ಷಣಿಕ ವಲಯವು ಗಂಭೀರವಾಗಿ ಪರಿಗಣಿಸಬೇಕಾದ ಅಧಿಕೃತ ಪಠ್ಯವನ್ನಾಗಿಯೂ ಮಾಡಿದೆ. ಜ್ಞಾನಾಕಾಂಕ್ಷಿಗಳಿಗೆ ಇದೊಂದು ಸಂಗ್ರಹಯೋಗ್ಯ ಗ್ರಂಥ.
Weight | 300 g |
---|---|
Author(s) |
Sahana Singh, Shivakumar G.V, Smitha H.S., Smitha Rao |
Date of Release |
15-01-2025 |
Hard/PaperBack |
Paperback |
ISBN |
978-93-91852-39-9 |
Language |
Kannada |
No. of Pages |
256 |
Publication |
Ayodhya Publications Pvt. Ltd. |
Size |
1/8th Demy |