Menu

Kannada

Kannada

Belaku Ondu Ilege Bandu - ಬೆಳಕು ಒಂದು ಇಳೆಗೆ ಬಂದು



Product details

ಬೆಳಕು ಒಂದು ಇಳೆಗೆ ಬಂದು...

ಖ್ಯಾತ ವಾಗ್ಮಿ, ಚಿಂತಕ, ಲೇಖಕ ಪ್ರಕಾಶ್ ಮಲ್ಪೆ ಅವರು ಬರೆದಿರುವ ಈ ವಿಶಿಷ್ಟ ಕೃತಿಯಲ್ಲಿ ಶ್ರೀರಾಮ, ಹನುಮಂತ ಮುಂತಾದ ಪೌರಾಣಿಕ ವ್ಯಕ್ತಿಗಳಿಂದ ಹಿಡಿದು ಡಾ. ಅಂಬೇಡ್ಕರ್, ಪಂಡಿತ ದೀನದಯಾಳು ಉಪಾಧ್ಯಾಯ, ಡಾ. ಹೆಡಗೆವಾರ್, ವರಕವಿ ದ.ರಾ. ಬೇಂದ್ರೆ, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ ಮುಂತಾದ ದೇಶದ ಐತಿಹಾಸಿಕ ವ್ಯಕ್ತಿಗಳವರೆಗೆ ಜೀವನ ವಿವರಗಳಿವೆ. ಈ ಮಹಾಪುರುಷರ ಜೀವನದ ಘಟನೆಗಳನ್ನಷ್ಟೇ ಹೇಳಿದ್ದರೆ ಇದೊಂದು ಜೀವನವೃತ್ತಾಂತವಾಗುತ್ತಿತ್ತು. ಆದರೆ ಪ್ರಕಾಶರು ಬರೆದಿರುವ ವ್ಯಕ್ತಿಚಿತ್ರಣಗಳು, ಕೇವಲ ಬದುಕಿನ ಹಂತಗಳನ್ನಷ್ಟೇ ವಿವರಿಸದೆ ವ್ಯಕ್ತಿಗಳ ಬದುಕುಗಳ ಒಳಹೊಕ್ಕು ವ್ಯಕ್ತಿತ್ವ ಚಿತ್ರಣವನ್ನೂ ಮಾಡುತ್ತವೆ. ಹಾಗಾಗಿ ಇಲ್ಲಿ ಆಯಾ ವ್ಯಕ್ತಿಗಳ ಬದುಕಿನ ಅನೇಕ ಸಂದರ್ಭಗಳು, ಅವುಗಳಲ್ಲಿ ಆಯಾ ವ್ಯಕ್ತಿಗಳು ನಡೆದುಕೊಂಡ ರೀತಿ, ಅವರ ಆಲೋಚನಾ ಸರಣಿ, ಅವರಲ್ಲಿದ್ದ ವಿಶಿಷ್ಟ ಗುಣಗಳು, ಅನನ್ಯ ಸಾಮರ್ಥ್ಯಗಳು - ಇವೆಲ್ಲವೂ ಅತ್ಯಂತ ಸ್ಪಷ್ಟವಾಗಿ ಕಾಣಿಸಿಕೊಂಡಿವೆ. ಆ ದೃಷ್ಟಿಯಿಂದ ಇದೊಂದು ಜೀವನ ಮಾರ್ಗದರ್ಶಿ ಕೃತಿಯೂ ಆಗಿದೆ.

You may also like

Home
Shop
Bag
Account