
Product details
ಬಿಡಿ ಬಿಡಿಯಾಗಿ ಪ್ರಕಟವಾದ ಲೇಖನಗಳನ್ನು ಒಂದು ಅನುಕ್ರಮಣಿಕೆಯಲ್ಲಿ ಜೋಡಿಸಿರುವುದರಿಂದ, ಓದುಗರಿಗೆ ಒಂದು ಚೌಕಟ್ಟಿನಲ್ಲಿ ವಿಷಯಗಳು ಗ್ರಹಿಸಲು ಅನುಕೂಲವಾಗುತ್ತದೆ. ಬರವಣಿಗೆ ಒಂದು ಸಾಮಾಜಿಕ ಹೊಣೆಗಾರಿಕೆ. ಹೀಗಾಗಿ ಪ್ರತೀಬಾರಿ ಲೇಖನಿಯನ್ನು ಕೈಗೆತ್ತಿಕೊಂಡಾಗಲೂ ಅದು ಓರ್ವ ಲೇಖಕನಾಗಿ ನಿರ್ವಹಿಸುತ್ತಿರುವ ಜವಾಬ್ದಾರಿ ಎನ್ನುವ ಅರಿವಿನೊಂದಿಗೆ ವಿಚಾರಗಳಿಗೆ ಲೇಖನದ ರೂಪ ಕೊಡಲಾಗಿದೆ. ಈ ಹಿನ್ನೆಲೆಯೊಳಗೆ ಇಲ್ಲಿರುವ ಬರಹಗಳು ರೂಪು ಪಡೆದಿದೆ. ಈ ಎಲ್ಲಾ ಲೇಖನಗಳ ನಡುವೆ ಒಂದು ಸಾಮಾನ್ಯ ಸೂತ್ರವಿದೆ. ರಾಷ್ಟ್ರೀ
ಯ ವಿಚಾರಗಳ ಕುರಿತಾದ ಬೇರೆ ಬೇರೆ ಆಯಾಮ ಚರ್ಚೆ ಇಲ್ಲಿದೆ. ಇಲ್ಲಿರುವುದು ಗತ ವಿಚಾರವೂ ಹೌದು, ವರ್ತಮಾನವೂ ಹೌದು. ನಮ್ಮ ಸುತ್ತಲಿನ ಘಟನೆಗಳಿಗೆ ಪ್ರತಿಕ್ರಿಯೆಯೂ ಇದೆ. ಉಳಿದಂತೆ ಸ್ವಾತಂತ್ರ್ಯ ಹೋರಾಟ, ಹೈದರಾಬಾದ್ ವಿಮೋಚನೆ, ಮಾತೃಭಾಷಾ ಶಿಕ್ಷಣ, ಪಠ್ಯ ಪುಸ್ತಕಗಳ ಪರಿಷ್ಕರಣೆ ಕುರಿತಂತೆ ಕೆಲವು ಲೇಖನಗಳಲ್ಲಿ ವಿವೇಚಿಸಲಾಗಿದೆ.
Similar products