Anuranana - Ga. Na. Bhat
Product details
ಗ.ನಾ. ಭಟ್ಟರ ಈ ಕೃತಿ ಸಂತೆಯ ಸಮಯಕ್ಕೆ ನೇಯ್ದ ಮೂರುಮೊಳ ಮಾಲೆಯಲ್ಲ. ಅವರ ಅಧ್ಯಯನಶೀಲತೆ, ತಾರ್ಕಿಕ ಮನಸ್ಥಿತಿ, ರಾಷ್ಟçದ ಬಗ್ಗೆ ಅವರಿಗಿರುವ ಕಳಕಳಿ ಎಲ್ಲವನ್ನೂ ಈ ಪ್ರಬಂಧಗುಚ್ಛ ಸ್ಪಷ್ಟವಾಗಿ ನಿರೂಪಿಸುತ್ತದೆ. ಇಲ್ಲಿ ಅಧ್ಯಾತ್ಮವಿದೆ, ಯೋಗವಿದೆ, ಬದುಕಿನ ಮೌಲ್ಯಗಳಿವೆ, ವ್ಯಕ್ತಿ ಚಿತ್ರಣಗಳಿವೆ. ನನಗೆ ತುಂಬಾ ಆಪ್ತವೆನಿಸಿದ್ದು ಅವರ ಬರವಣಿಗೆಯ ಶೈಲಿ. ಇದರಲ್ಲಿ ಅವರ ಒಳತುಡಿತ ಎದ್ದು ಕಾಣುತ್ತದೆ. ಹತ್ತು ಕೃತಿಗಳನ್ನು ತಿರುವಿ ಹಾಕುವುದಕ್ಕಿಂತ ಒಂದು ‘ಅನುರಣನ’ ಓದುವುದು ಲೇಸು. ಏಕೆಂದರೆ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಗ.ನಾ. ಭಟ್ಟರು ಸ್ಪರ್ಶಿಸದ ವಿಷಯಗಳಿಲ್ಲ. ತಮ್ಮ ಜಿಜ್ಞಾಸು ಮನಸ್ಸನ್ನು ಎಲ್ಲೆಡೆ ಹರಿಯಬಿಟ್ಟು ಹಲವನ್ನು ನಮ್ಮೆದುರು ಹರಡಿದ್ದಾರೆ, ನಿಸ್ಸÀಂದೇಹವಾಗಿ ಇದು ಸಂಗ್ರಹ ಯೋಗ್ಯ ಕೃತಿ.
– ರವೀಂದ್ರ ಜೋಶಿ, ಹಿರಿಯ ಪತ್ರಕರ್ತ.
WEIGHT | 180 g |
AUTHOR(S) | Ga. Na. Bhat |
DATE OF RELEASE | 2023 |
HARD/PAPERBACK | Paperback |
ISBN | 978-9391852-53-5 |
LANGUAGE | Kannada |
NO. OF PAGES | 16-06-1900 |
PUBLICATION | Ayodhya Publications |