Product details
ಕೊಡಗಿನಲ್ಲಿ ಸಾಹಿತ್ಯಕ್ಕೆ ಬೆಲೆಯಿಲ್ಲ, ನೆಲೆಯಿಲ್ಲ ಎನ್ನುತ್ತಿದ್ದ ಕಾಲದಲ್ಲಿ ಸಾಹಿತ್ಯದ ಮೇಲೆ, ನಾಟಕದ ಮೇಲೆ ಅತೀವ ಆಸಕ್ತಿಯಿಂದ ಪ್ರೀತಿಯನ್ನು ಅಭಿಮಾನವನ್ನು ಬೆಳೆಸಿಕೊಂಡು ಕನ್ನಡ ಸಾಹಿತ್ಯವನ್ನು, ಕೊಡವ ಸಾಹಿತ್ಯವನ್ನು ಬೆಳೆಸಿದ ಮಹಾನ್ ಸಾಹಿತಿ ಇವರು.
ಶಾಲೆಗಳೇ ಇಲ್ಲದ ಕಾಲದಲ್ಲಿ ಅರ್ಚಕ ಕುಟುಂಬದ ಸಹವಾಸದಲ್ಲಿ, ತನ್ನ ಆರನೇ ವಯಸ್ಸಿನಲ್ಲಿಯೇ ಜೈಮಿನಿ ಭಾರತವನ್ನು ಕಂಠಪಾಠ ಮಾಡಿ ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿಯೇ ಸಾಬೀತು ಪಡಿಸಿದ ಅಪರೂಪದ ವ್ಯಕ್ತಿತ್ವ. ಅದರಿಂದಲೇ ಅಪ್ಪನೆರವಂಡ ಅಪ್ಪಚ್ಚ ಅವರನ್ನು ಆದಿಕವಿ ಎನ್ನುವರು. ಚಿಕ್ಕ ವಯಸ್ಸಿನಲ್ಲಿಯೇ ಬಡತನವನ್ನು ಲೆಕ್ಕಿಸದೆ ಓದುವ, ಬರೆಯುವ ಹವ್ಯಾಸವನ್ನು ಬೆಳೆಸಿಕೊಳ್ಳುವ ಮೂಲಕ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿರುವ ಅಪ್ಪಚ್ಚ ಅವರ ಜೀವನ ಮಕ್ಕಳಿಗೆ ಎಲ್ಲ ರೀತಿಯಿಂದಲೂ ಸ್ಫೂರ್ತಿ ನೀಡುವಂತದ್ದು.
- ಲೇಖಕಿಯ ಮನದ ಮಾತು
Similar products