Product details
ಹಿತವಾದುದೊಂದು ದೀಪ ಹಾಕಿಕೊಂಡು ಕುಳಿತು ಓದಲಿಕ್ಕೆ ಈ ಪುಸ್ತಕ ಕೈಗೆತ್ತಿಕೊಳ್ಳಿ. ಕಾದಂಬರಿಯ ಕೊನೆಯ ಪುಟ ಓದಿ ಮುಗಿಸುವ ತನಕ ನೀವು ಮಲಗಲಾರಿರಿ, 'ದಿ ಗಾಡ್ ಫಾದರ್' ಕಾದಂಬರಿಯ ಕಥಾವಸ್ತುವೇ ಅಂತಹುದು. ದೂರದಿಂದ ನಿಂತು ನೋಡಿದರೆ ಇದು ಭೂಗತದ ಆಗುಹೋಗುಗಳ ಕುರಿತಾದ ಕಾದಂಬರಿ ಅನ್ನಿಸುತ್ತದೆ. ಒಮ್ಮೆ ಒಳಹೊಕ್ಕು ನೋಡಿ: ಚಿನ್ನ ಮಾದಿರೆಡ್ಡಿಯ ಫ್ಯಾಮಿಲಿಯಲ್ಲಿ ನೀವೂ ಒಬ್ಬರಾಗಿಬಿಡುತ್ತೀರಿ, ಸಾವಿರಾರು ಕೂವಗಳಿರುವ ಭೂಗತದ ಹುತ್ತ ಈ ಕಾದಂಬರಿಯಲ್ಲಿ ಅನಾವರಣಗೊಳ್ಳುವ ವಿಧಾನವೇ ಅದ್ಭುತವಾಗಿದೆ.
ಯಾವ ವಿಷಯ ಆರಿಸಿಕೊಂಡರೂ ರವಿ ಬೆಳಗರೆ ಚೆನ್ನಾಗಿ ಬರೆಯುತ್ತಾರೆ. ಆದಕ್ಕೆ ಅವರ ಪ್ರತಿ ಬರಹವೂ ಸಾಕ್ಷಿಯೇ. ಆದರೆ ಭೂಗತ ಲೋಕದ ಬಗ್ಗೆ ಬರೆಯಲು ಕುಳಿತಾಗಲೆಲ್ಲ ಅವರು ಬೇರೆಯದೇ ಆದ ಶ್ರದ್ಧೆಯಿಟ್ಟುಕೊಂಡು ಕೆಲಸ ಮಾಡುತ್ತಾರೆ. ಆ ಕೌಶಲ್ಯ 'ದಿ ಗಾಡ್ ಫಾದರ್' ಕೃತಿಯ ಪ್ರತಿ ಸಾಲಿನಲ್ಲೂ
- ಎಂ.ಕೆ.ಸತ್ಯ ಶ್ರೀನಿವಾಸ್, ಮೈಸೂರು
| Details | Value |
|---|---|
| Author(s) | Ravi Belagere |
| Weight | 250 |
| Hard_Paperback | Paper Back |
| Publication | Bhavana Prakashna |
| Size | 5.5" X 8.5" |
| Pages | 350 |
Similar products