2035 - Political Crime Thriller
Product details
ಹೆಸರಿನಷ್ಟೇ ವಿಶಿಷ್ಟವಾದ ರಾಜಕೀಯ ಥ್ರಿಲ್ಲರ್ ಕಾದಂಬರಿ 2035. ರಾಜಕೀಯದ ಚದುರಂಗದಾಟ, ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮಾಯಕರನ್ನು ದಾಳಗಳಾಗಿಸಿಕೊಳ್ಳುವ ಸ್ವಾರ್ಥಿಗಳ ನಯವಂಚನೆ, ಮೋಸದಾಟಕ್ಕೆ ಬಲಿಬೀಳುವ ಮುಗ್ಧ ಸಮಾಜ, ದುಷ್ಟರು ಮತ್ತು ಶಿಷ್ಟರ ಕೈಯಲ್ಲಿ ಬಗೆಬಗೆಯಲ್ಲಿ ಬಳಕೆಯಾಗುವ ಆಧುನಿಕ ತಂತ್ರಜ್ಞಾನಗಳು, ಜಗತ್ತು ಎಷ್ಟೇ ಆಧುನಿಕವಾದರೂ ಮನುಷ್ಯನಲ್ಲಿ ಮೂಲಭೂತವಾಗಿ ಅಡಗಿಕೊಂಡಿರುವ ಪಾಶವೀಪ್ರವೃತ್ತಿ… ಹೀಗೆ ಹತ್ತುಹಲವು ಆಯಾಮಗಳಲ್ಲಿ ತೆರೆದುಕೊಳ್ಳುವ ಕಥಾನಕವನ್ನು ಕಟ್ಟಿಕೊಟ್ಟಿದ್ದಾರೆ ಭರವಸೆಯ ಕಾದಂಬರಿಕಾರ ಧೀರಜ್ ಪೊಯ್ಯೆಕಂಡ.